ಸೋಮವಾರ, ಜನವರಿ 30, 2017

Jokes SwalpaNagri

ಇತ್ತೀಚೆಗೆ ಮನೆಯಲ್ಲಿ ಕುಳಿತು ಮೊಬೈಲ್ನಲ್ಲಿ ಏನನ್ನು ಬೇಕಾದ್ರೂ ಆರ್ಡರ್ ಮಾಡಿ ಕೊಳ್ಳಬಹುದು.
ನಾನು ಆರ್ಯಭವನ್ ಸ್ವೀಟ್ ಸ್ಟಾಲ್ಗೆ ಫೋನ್ ಮಾಡಿದೆ. ಟ್ರಿಂಗ ಟ್ರಿಂಗ.....
ಆರ್ಯಭವನಕ್ಕೆ ನಿಮಗೆ ಸ್ವಾಗತ.. ಹೇಳಿ, ಏನು ಬೇಕಾಗಿತ್ತು??
ನನಗೆ ಯಾವುದಾದರೂ ಸಿಹಿ ತಿಂಡಿ ಬೇಕಿತ್ತು
ಲಾಡೂ ಬೇಕಾದರೆ ಒಂದನ್ನು ಒತ್ತಿ, ಹಲ್ವ ಬೇಕಾದರೆ ಎರಡನ್ನು ಒತ್ತಿ, ಒಬ್ಬಟ್ಟು ಬೇಕಾದರೆ ಮೂರನ್ನು ಒತ್ತಿ...
ನಾನು ಒಂದನ್ನು ಒತ್ತಿದೆ
ಬೂ0ದಿ ಲಾಡೂಗಾಗಿ ಒಂದನ್ನು ಒತ್ತಿ, ಡ್ರೈ ಫ್ರುಟ್ ಲಾಡೂ ಬೇಕಾದರೆ ಎರಡನ್ನು ಒತ್ತಿ, ಬೇಸನ್ ಲಾಡೂ ಬೇಕಾದರೆ ಮೂರನ್ನು ಒತ್ತಿ...
ನಾನು ಒಂದನ್ನು ಒತ್ತಿದೆ
ಕಾಲು ಕೆಜಿ ಗಾಗಿ ಒಂದನ್ನು ಒತ್ತಿ, ಒಂದು ಕೆಜಿ ಬೇಕಾದರೆ ಎರಡನ್ನು ಒತ್ತಿ, ಒಂದು
ಕ್ವಿಂಟಲ್ ಬೇಕಾದರೆ ಮೂರನ್ನು ಒತ್ತಿ...
ಅಚಾತುರ್ಯದಿಂದ ನಾನು ಮೂರನ್ನು ಒತ್ತಿಬಿಟ್ಟೆ 😮
ಹೆದರಿ ಕಾಲ್ ಕಟ್ ಮಾಡಿ ಬಿಟ್ಟೆ.
ಮುಂದಿನ ಮೂರು ನಿಮಿಷದಲ್ಲಿ ಆರ್ಯಭವನ್ ದಿಂದ ನನಗೆ ಫೋನ್ ಕಾಲ್!!!😱
ನಿಮ್ಮ ಕಡೆಯಿಂದ ನಮಗೆ ಒಂದು ಕ್ವಿಂಟಲ್ ಬೂ0ದಿ ಲಾಡೂಗಾಗಿ ಆರ್ಡರ್ ಬಂದಿದೆ.
ನಿಮ್ಮ ಮನೆಯ ವಿಳಾಸ ತಿಳಿಸಿ.
ನಾನಂದೆ ... ನಾನು ಫೋನ್ ಮಾಡಿಲ್ಲವಲ್ಲ
ಹಾಗಾದರೆ ನಿಮ್ಮ ತಮ್ಮ ಕಾಲ್ ಮಾಡಿರಬಹುದು, ಇದೇ ನಂಬರ್ ನಿಂದಲೇ ಕಾಲ್ ಬಂದಿದ್ದು. ನಿಮ್ಮ ತಮ್ಮನಿಗೆ ಫೋನ್ ಕೊಡಿ..
ನಾವು ಆರು ಜನ ಅಣ್ಣ ತಮ್ಮಂದಿರಿದ್ದೆವೆ. ಮೊದಲನೆಯವರಿಗಾಗಿ ಒಂದನ್ನು ಒತ್ತಿ, ಎರಡನೇಯವರಿಗಾಗಿ ಎರಡನ್ನು ಒತ್ತಿ, ಮೂರನೇ ಯವರಿಗಾಗಿ ಮೂರನ್ನು ಒತ್ತಿ...
ಎದುರಿನ ಫೋನ್ ಕಾಲ್ ಕಟ್ ಆಗಿ ಹೋಯ್ತು 😅

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ