ಸೋಮವಾರ, ಜನವರಿ 30, 2017

Jokes SwalpaNagri

ನಮ್ಮ ಬೋರೆಗೌಡ ಲಂಡನ್‍ನ ಶ್ರೀಮಂತ ಕಾಲೋನಿಯಲ್ಲಿ ಮನೆ ಮಾಡಿದ..😀
ಬರೀ ಕ್ರಿಶ್ಚಿಯನ್ನರು. ನಮ್ಮ ಬೋರೇಗೌಡನಿಗೆ ದಿನಾ ಕೋಳಿ ತಿನ್ನುವ ಅಭ್ಯಾಸ.!! ಅಲ್ಲಿ ನೋಡಿದರೆ ಪಾಪ ಆ ಕಾಲೋನಿಯ ಜನರೆಲ್ಲಾ ಅದೆಂತದೋ ಏಸುವಿನ ಸಸ್ಯಾಹಾರಿ ವ್ರತ ಮಾಡುತ್ತಿದ್ದರು..!!
ಒಂದು ತಿಂಗಳು ಮಾಂಸ ತಿನ್ನುವ ಹಾಗಿಲ್ಲ.😟😐👎
ನಮ್ಮ ಬೋರೇಗೌಡನ ಮನೆಯಿಂದ ದಿನಾ ಮಸಾಲೆ ವಾಸನೆ. ಕಡೆಗೆ ತಡೆಯಲಾರದೆ ನೇರವಾಗಿ ಪೋಪ್‍ಗೆ ದೂರು ನೀಡಿದರು.👿😠
ಪೋಪ್ ಬಂದು ತನ್ನ ಅನುಯಾಯಿಗಳ ಪರವಾಗಿ ಮಾತನಾಡಿದರು. ನೀನು ಏಕೆ ನಮ್ಮ ಮತಕ್ಕೆ ಸೇರಬಾರದು ಎಂದು ಅವನ ಮನವೊಲಿಸಿದರು.
ನಮ್ಮ ಬೋರೆಗೌಡ ಒಪ್ಪಿಕೊಂಡ.!!
ಪೋಪ್ ಅವನ ತಲೆಯ ಮೇಲೆ ನೀರು ಸುರಿದು, "ನೀನು ಹುಟ್ಟಿದ್ದು ಹಿಂದುವಾಗಿ, ಬೆಳೆದದ್ದೂ ಹಿಂದುವಾಗಿ, ಆದರೆ ಇನ್ನ ಮೇಲೆ ನೀನು ಕ್ರಿಶ್ಚಿಯನ್" ಎಂದರು. ಕಾಲೋನಿಯ ಜನ ನಿಟ್ಟುಸಿರುಬಿಟ್ಟರು....
ಮಾರನೆಯ ದಿನ ಮತ್ತೆ ಬೋರೆಗೌಡನ ಮನೆಯಿಂದ ಮಸಾಲೆ ಘಾಟು..!!😳 ಕಾಲೋನಿಯ ಜನ ಗಾಬರಿಯಾದರು. ಮತ್ತೆ ಪೋಪ್‍ಗೆ ಕರೆ ಹೋಯಿತು. ಪೋಪ್ ಬಂದು ನೋಡಿದರೆ ಬೋರೆಗೌಡ ಕೋಳಿಯೊಂದನ್ನು ಹಿಡಿದುಕೊಂಡು ಅದರ ಮೇಲೆ ನೀರು ಸುರಿಯುತ್ತಿದ್ದಾನೆ.!!😳😐 "ನೀನು ಹುಟ್ಟಿದ್ದು ಕೋಳಿಯಾಗಿ, ಬೆಳೆದದ್ದೂ ಕೋಳಿಯಾಗಿ, ಆದರೆ ನೀನಿಗ ಆಲೂಗಡ್ಡೆ"..!!😐😄😆😆
ಪೋಪ್ ಅಲ್ಲೆ ಸುಸ್ತು......!!😆😆😄

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ