ಭಾನುವಾರ, ಜನವರಿ 29, 2017

Jokes ALLA kanree ಹಸಿವಿನ ಆರ್ಭಟ

*ಹಸಿವಿನ ಆರ್ಭಟ*

```ಒಂದು ಬಡ ಕುಟುಂಬವಿತ್ತು.
ಆ ಕುಟುಂಬದಲ್ಲಿ 5 ಜನರಿದ್ದರು. ತಂದೆ ತಾಯಿ ಮತ್ತು ಮೂವರು ಮಕ್ಕಳು,
ತಂದೆ ಯಾವತ್ತೂ ಅನಾರೋಗ್ಯದಿಂದ ಇರುತ್ತಿದ್ದನು, ಕಡೆಗೆ ಒಂದು ದಿನ ತಂದೆ ಸಾಯುತ್ತಾನೆ, 3 ದಿನಗಳವರೆಗೆ ಅಕ್ಕಪಕ್ಕದವರು ಊಟ ಕೊಡುತ್ತಾರೆ.
ನಂತರ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ತಾಯಿಯು ಕೆಲದಿನಗಳವರೆಗೆ ಹಾಗೋ ಹೀಗೋ ಮಾಡಿ ಮಕ್ಕಳಿಗೆ ಊಟ ಕೊಡುತ್ತಾಳೆ, ಆದರೆ ಎಲ್ಲಿಯವರೆಗೆ? ಕೊನೆಗೆ ಮತ್ತೆ ಹಸಿದ ಹೊಟ್ಟೆಯಲ್ಲಿ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ಆಹಾರವಿಲ್ಲದೇ ಅನಾರೋಗ್ಯದಿಂದ 8 ವರ್ಷದ ಮಗ ಹಾಸಿಗೆ ಹಿಡಿಯುತ್ತಾನೆ.
 ಒಂದು ದಿನ..
5 ವರ್ಷದ ಮಗು ಅವಳ ತಾಯಿಯ ಕಿವಿಯಲ್ಲಿ ಕೇಳುತ್ತದೆ. "ಅಮ್ಮಾ ಅಣ್ಣ ಯಾವಾಗ ಸಾಯುತ್ತಾನೆ?"
ಆಗ ತಾಯಿ ದುಃಖದಲ್ಲಿ ಕೇಳುತ್ತಾಳೆ ಯಾಕಮ್ಮ ಹಾಗೆ ಕೇಳ್ತಿಯಾ?.

ಆ 5 ವರ್ಷದ ಮಗು ಉತ್ತರ ಹೇಳುತ್ತದೆ ಆ ಉತ್ತರ ಕೇಳಿದರೆ ನಿಮ್ಮ ಕಣ್ಣುಗಳಲ್ಲಿ ಕಣ್ಣೀರು ಬರುತ್ತವೆ.

ಆ ಮಗುವಿನ ಉತ್ತರ ಹೀಗಿರುತ್ತದೆ "ಅಮ್ಮಾ. ಅಣ್ಣ ಸತ್ತರೆ ಊಟ ಅಕ್ಕಪಕ್ಕದವರು ಊಟ ಕೊಡ್ತಾರಮ್ಮಾ...!

ಗೆಳೆಯರೇ ನಮ್ಮ ಆಹಾರದಲ್ಲಿ ಬಡವರ ಪಾಲೂ ಇದೆ.

ಬಡವರಿಗೆ ಸಹಾಯ ಮಾಡುವುದರಲ್ಲಿಯೂ ಸಂತೋಷವಿದೆ.
"ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ"


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ